ಮೆಡಿಕಲ್ ಕೌನ್ಸಿಲ್ ತಪಾಸಣೆಗೆ ಬಂದಾಗ ಮೆಡಿಕಲ್ ಕಾಲೇಜ್ , ಡೆಂಟಲ್ ಕೌನ್ಸಿಲ್ ಬಂದಾಗ ಡೆಂಟಲ್ ಕಾಲೇಜ್, ಎ. ಐ.ಸಿ.ಟಿ.ಇ ಬಂದಾಗ ಎಂಜಿನೀರಿಂಗ್ ಕಾಲೇಜು ಎಂದು ಬೋರ್ಡ್ ಹಾಕಿ ಒಂದೇ ಕಟ್ಟಡದಲ್ಲಿ ಎಲ್ಲಾ ಕಾಲೇಜು ನಡೆಸಿ ಕಡೆಗೆ ವಿದ್ಯಾರ್ಥಿಗಳ ತಲೆಗೆ ಟೋಪಿ ಹಾಕುವ ಶಿಕ್ಷಣ ಸಂಸ್ಥೆಗಳ ವಿರುಧ್ಧ ವಿದ್ಯಾರ್ಥಿ ಪರಿಷತ್ ಸಾಕಷ್ಟು ಹೋರಾಟಗಳನ್ನು ನಡೆಸಿದೆ. ಸಾಲಮಾಡಿ ಡೊನೇಶನ್ ಕಟ್ಟಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ಇಂಥಹ ಡೋಂಗಿ ಕಾಲೇಜುಗಳಲ್ಲಿ ವ್ಯಯಿಸಿದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ಎಷ್ಟೊಂದು ಕಷ್ಟಕರವೆಂಬುದು ನಮಗೆಲ್ಲ ತಿಳಿದಿದೆ.
ಬಡ ವಿದ್ಯಾರ್ಥಿಗಳಿಂದ ಹಣ ಸುಲಿಯುವುದಲ್ಲದೆ ಸೇವೆಯ ಸೋಗಿನಲ್ಲಿ ವಿದ್ಯೆಯನ್ನು ಮಾರುವ ಶಿಕ್ಷಣ ಸಂಸ್ಥೆಗಳಿಗೆ ತಾವು ವಸೂಲು ಮಾಡುವ ಲಕ್ಷಗಟ್ಟಲೆ ಹಣಕ್ಕೆ ತಕ್ಕ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಕಾಳಜಿ ಕಡಿಮೆಯಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಇಂಥಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ನೆರವಿಗೆ ಬರುವುದು ಗ್ರಾಹಕ ಕಾನೂನುಗಳು. ಪತ್ರಿಕೆಯಲ್ಲಿ ಬಣ್ಣ ಬಣ್ಣದ ಜಾಹೀರಾತು ಪ್ರಕಟಿಸಿ ಕೊನೆಗೆ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಡಲು ಇತ್ತೀಚಿಗೆ ವಿದ್ಯಾರ್ಥಿಗಳು ಗ್ರಾಹಕ ಹಿತರಕ್ಷಣಾ ಕಾಯ್ದೆಯ ಮೊರೆ ಹೋಗುತ್ತಿದ್ದಾರೆ.
ಹಾಗಾದರೆ ಶಿಕ್ಷಣ ವ್ಯಾಪಾರದ ವಸ್ತುವಲ್ಲದ ಕಾರಣ ವಿದ್ಯಾರ್ಥಿ ಗ್ರಾಹಕ ಹೇಗಾಗುತ್ತಾನೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಅಲ್ಲದೆ ಬಹುತೇಕ ಪ್ರಕರಣದಲ್ಲಿ ಆಪಾದಿತ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದಲ್ಲಿ ಇದೇ ಅನುಕೂಲ ಶಾಸ್ತ್ರವನ್ನು ಹಿಡಿದು ಕೂರಲು ಪ್ರಯತ್ನಿಸುತ್ತವೆ. ಆದರೆ ಗ್ರಾಹಕ ಹಿತರಕ್ಷಣಾ ಕಾಯಿದೆಯ ಪ್ರಕಾರ ಯಾವುದೇ ಸೇವೆಯನ್ನು ಹಣ ತೆತ್ತು ಪಡೆಯುವ ಅಥವಾ ಯಾವುದೇ ವಸ್ತುವನ್ನು ಹಣ ಕೊಟ್ಟು ಖರೀದಿಸಿದ ವ್ಯಕ್ತಿಯು ಗ್ರಾಹಕನೆನಿಸಿಕೊಳ್ಳುತ್ತಾನೆ. ಹೀಗಾಗಿ ವಿದ್ಯಾರ್ಥಿಯು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತಾನೆ ಎಂದು ಸರ್ವೋಚ್ಚ ನ್ಯಾಯಾಲಯ ಮತ್ತೆ ಮತ್ತೆ ಸಾರಿ ಹೇಳಿದೆ.
ಬುಧ್ಧಿಸ್ಟ್ ಮಿಶನ್ ಕಾಲೇಜು ಪ್ರಕರಣ
ಈ ಪ್ರಕರಣದಲ್ಲಿ ಪಟ್ನಾದ ಬುದ್ಧಿಸ್ಟ್ ಮಿಶನ್ ಡೆಂಟಲ್ ಕಾಲೇಜು ತಾನು ಮಗಧ ವಿ.ವಿ.ಹಾಗೂ ಭಾರತೀಯ ದಂತವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವುದಾಗಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿತು. ಅಲ್ಲದೆ ತನ್ನ ಕಾಲೇಜಿನಲ್ಲಿ ಅತ್ಯುತ್ತಮ ಗ್ರಂಥಾಲಯ ಹಾಗೂ ಪ್ರಯೋಗಾಲಯ ಸೌಲಭ್ಯವಿರುವುದಾಗಿ ಹೇಳಿಕೊಂಡ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ದಂತ ವೈದ್ಯಕೀಯ ಕೋರ್ಸಿಗೆ ಸೇರಿಸಿಕೊಂಡಿತು. ಆದರೆ ಕಾಲೇಜು ಸೇರಿಕೊಂಡ ನಂತರ ವಿದ್ಯಾರ್ಥಿಗಳಿಗೆ ಕಾಲೇಜು ತಮ್ಮೆಲ್ಲರ ಹಲ್ಲು ಕಿತ್ತಿರುವುದು ಮನವರಿಕೆಯಾಯಿತು. ವಾಸ್ತವಕ್ಕೆ ಆ ಕಾಲೇಜಿಗೆ ಯಾವ ವಿ.ವಿ. ಮಾನ್ಯತೆಯೂ ಇರಲಿಲ್ಲ, ದಂತ ವೈದ್ಯಕೀಯ ಮಂಡಳಿಯ ಅನುಮೋದನೆಯೂ ಇರಲಿಲ್ಲ. ಅಲ್ಲದೆ ವರ್ಷ ಕಳೆದರೂ ಯಾವ ಪರೀಕ್ಷೆಗಳನ್ನು ನಡೆಸುವ ಲಕ್ಷಣಗಳೂ ಗೋಚರಿಸಲಿಲ್ಲ. ಸತತ 3 ವರ್ಷಗಳ ಕಾಲ ಇದೇ ಸುಳ್ಳು ಜಾಹೀರಾತು ನೀಡಿದ ಕಾಲೇಜು ದಂತವೈದ್ಯರಾಗುವ ಕನಸು ಹೊತ್ತ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲುಹಾಕಿತ್ತು. ಕೊನೆಗೆ 1994 ರಲ್ಲಿ 11 ಜನ ವಿದ್ಯಾರ್ಥಿಗಳು ಕಾಲೇಜಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು. ವಿದ್ಯಾರ್ಥಿಗಳು ಗ್ರಾಹಕರಲ್ಲವೆಂಬ ಕಾಲೇಜಿನ ವಾದವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ ಆಯೋಗ ವಿದ್ಯಾರ್ಥಿಗಳಿಗೆ ಅವರ ಶುಲ್ಕವನ್ನು ಮರು ಪಾವತಿಸುವುದರ ಜತೆಗೆ ಪರಿಹಾರವನ್ನೂ ನೀಡುವಂತೆ ಆದೇಶಿಸಿತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ ಕಾಲೇಜು ತಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಸ್ಥಾಪಿತವಾಗಿದ್ದು, ಸರಕಾರ ಹಾಗೂ ಇತರೆ ಸಂಸ್ಥೆಗಳಿಂದ ಎಲ್ಲ ರೀತಿಯ ಅನುಮತಿಗಳನ್ನು ಪಡೆಯುವ ಪ್ರಯತ್ನದಲ್ಲಿದೆ ಎಂದು ವಾದಿಸಿತು. ಆದರೆ ಯಾವುದೇ ಮಾನ್ಯತೆ ಇಲ್ಲದಿದ್ದರೂ ಎಲ್ಲಾ ಇದೆ ಎಂದು ಜಾಹೀರಾತು ನೀಡಿ ವಿದ್ಯಾರ್ಥಿಗಳಿಗೆ ಮೋಸವೆಸಗಿದ ಕಾಲೇಜಿನ ವರ್ತನೆಯನ್ನು ಸೇವಾ ನ್ಯೂನತೆ ಮತ್ತು ಅನುಚಿತ ವ್ಯವಹಾರ ಪದ್ಧತಿ ಎಂದು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕ, ಅವರ ಇತರೆ ಖರ್ಚು ವೆಚ್ಚ, ನ್ಯಾಯಾಲಯದ ಖರ್ಚು ಮತ್ತು ಪರಿಹಾರವನ್ನೂ ಸೇರಿಸಿ 11 ವಿದ್ಯಾರ್ಥಿಗಳಿಗೆ ತಲಾ 3 ಲಕ್ಷ ರೂಪಾಯಿಗಳನ್ನು ಬಡ್ಡಿ ಸಹಿತ ಪಾವತಿಸುವಂತೆ ಕಾಲೇಜಿಗೆ ಆದೇಶಿಸಿತು.
ಇದೆ ರೀತಿ ಇತ್ತೀಚಿಗೆ ಐ.ಐ.ಪಿ. ಎಂ. ಎಂಬ ಶಿಕ್ಷಣ ಸಂಸ್ಥೆಯು ಯಾವುದೇ ರೀತಿಯ ಮಾನ್ಯತೆ ಹೊಂದಿಲ್ಲ ಎಂದು ಯು.ಜಿ.ಸಿ. ದೇಶಾದ್ಯಂತ ಜಾಹೀರಾತು ಹೊರಡಿಸಿತ್ತು. ಆದಾಗ್ಯೂ ಈ ಸಂಸ್ಥೆ ಯಾವುದೋ ವಿದೇಶಿ ವಿ.ವಿ.ಯಿಂದ ಸರ್ಟಿಫಿಕೇಟ್ ಕೊಡಿಸುವುದಾಗಿ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತಲೇ ಇದೆ ಹಾಗೂ ಯು. ಜಿ.ಸಿ. ಜತೆಗೆ ಕಾನೂನು ಸಮರದಲ್ಲಿ ನಿರತವಾಗಿದೆ.
'ಸೇವಾ ನ್ಯೂನತೆ' ಯಾವಾಗ ?
ವಿದ್ಯಾರ್ಥಿಯು ಗ್ರಾಹಕ ಹಿತರಕ್ಷಣಾ ಕಾಯಿದೆಯ ಅಡಿಯಲ್ಲಿ ಬರುವುದರಿಂದ ಸಾಮಾನ್ಯವಾಗಿ ಈ ಕೆಳಗಿನ ಕೆಲವು ಅಂಶಗಳನ್ನು ಸೇವಾನ್ಯೂನತೆ ಎಂದು ಪರಿಗಣಿಸಬಹುದಾಗಿದೆ:
- ಸರಕಾರದ ಹಾಗೂ ನಿಗದಿತ ಸಂಸ್ಥೆಗಳ ಮಾನ್ಯತೆ ಇಲ್ಲದೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು
- ಸೂಕ್ತ ಅರ್ಹತೆಯುಳ್ಳ ಶಿಕ್ಷಕರನ್ನು ನೇಮಿಸದಿರುವುದು
- ಸರಕಾರದಿಂದ ನಿಗದಿಪಡಿಸಿದ ಪಥ್ಯಕ್ರಮ ಹೊರತುಪಡಿಸಿ ಬೇರೆಯೇ ಪಥ್ಯಕ್ರಮವನು ಅನುಸರಿಸುವುದು
- ಉದ್ಯೋಗ ನೀಡುವ ಸುಳ್ಳು ಭರವಸೆ
- ಸೂಕ್ತ ಕಾರಣಗಳಿಲ್ಲದೆ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸುವುದು
- ಪ್ರವೇಶದ ವೇಳೆಯಲ್ಲಿ ತಿಳಿಸಿದ ಸೌಲಭ್ಯಗಳನ್ನು ಬಳಿಕ ನೀಡದೆ ಇರುವುದು
- ರಶೀದಿ ನೀಡದೆ ಶುಲ್ಕ ವಸೂಲಿ ಮಾಡುವುದು (ಇದನ್ನು unfair trade practice ಎಂದು ಪರಿಗಣಿಸಬಹುದು)
ನಾವೇನು ಮಾಡಬಹುದು ?
'prevention is better than cure' ಎಂಬಂತೆ ಹಳ್ಳಕ್ಕೆ ಬಿದ್ದ ಮೇಲೆ ಯೋಚಿಸುವ ಬದಲು ಇಂಥಹ ಟೋಪಿ ಸಂಸ್ಥೆಗಳ ಬಗ್ಗೆ ಎಚ್ಚರ ವಹಿಸುವುದು ಉತ್ತಮ. ಹೀಗಾಗಿ ಯಾವುದೇ ವಿದ್ಯಾಸಂಸ್ಥೆಗೆ ಪ್ರವೇಶ ಪಡೆಯುವ ಮುನ್ನ ವಿದ್ಯಾರ್ಥಿಗಳು ಈ ಕೆಳಗಿನ ಅಂಶಗಳನ್ನು ಖಾತರಿಪಡಿಸಿಕೊಳ್ಳುವುದು ಸೂಕ್ತ :
- ನೀಡಿದ ಶುಲ್ಕದ ಸಂಪೂರ್ಣ ಮೊತ್ತಕ್ಕೆ ರಶೀದಿ ಪಡೆಯುವುದು
- ಸಂಸ್ಥೆಯ ಜಾಹೀರಾತು ಅಥವಾ prospectus ಅನ್ನು ಕೇಳಿ ಪಡೆದು ಇಟ್ಟುಕೊಳ್ಳುವುದು.
- ಸಂಸ್ಥೆಗೆ ದೊರಕಿರುವ ಮಾನ್ಯತೆಗಳ ದಾಖಲೆಗಳ ಪ್ರತಿಯನು ಕೇಳಿ ಪಡೆಯುವುದು
- ಪ್ರವೇಶಕ್ಕೆ ಮುನ್ನ ಸಂಸ್ತೆಯಲ್ಲಿರುವ ಸವಲತ್ತುಗಳ ಬಗ್ಗೆ ಮತ್ತು ಶಿಕ್ಷಕರ ಹಾಗೂ ಅವರ ಶೈಕ್ಷಣಿಕ ಅರ್ಹತೆಯ ಕುರಿತು ವಿವರ ಪಡೆಯುವುದು
- ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣ ಸಂಸ್ತೆಗಳಿಗೆ ಮಾನ್ಯತೆ ನೀಡುವ ಸರಕಾರೀ ಸಂಸ್ಥೆಗಳ ವೆಬ್ ಸೈಟ್ ಗೆ ಭೇಟಿ ನೀಡಿ ಆ ಸಂಸ್ಥೆ ನಿಜವಾಗಿಯೂ ಮಾನ್ಯತೆ ಪಡೆದಿದೆಯೇ ಅಥವಾ ಮಾನ್ಯತೆಯನ್ನು ವಾಪಸ್ ಪಡೆಯಲಾಗಿದೆಯೇ ಎಂದು ಪರಿಶೀಲಿಸುವುದು. ಅಗತ್ಯ ಬಿದ್ದಲ್ಲಿ ಕರೆ ಮಾಡಿ ಖಚಿತಪಡಿಸಿಕೊಳ್ಳುವುದು. ಉದಾಹರಣೆಗೆ http://www.aicte-india.org/ ವೆಬ್ ಸೈಟ್ ನಲ್ಲಿ ಮಾನ್ಯತೆ ಪಡೆದ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು, http://www.barcouncilofindia.org/ ವೆಬ್ ಸೈಟ್ ನಲ್ಲಿ ಮಾನ್ಯತೆ ಪಡೆದ ಕಾನೂನು ಕಾಲೇಜುಗಳ ಪಟ್ಟಿಯನ್ನು ನೋಡಬಹುದಾಗಿದೆ. ಅಲ್ಲದೆ ಯಾವುದೇ ಕಾಲೇಜು ಒಂದು ವಿಶ್ವ ವಿದ್ಯಾನಿಲಯದ ಮಾನ್ಯತೆ ಇದೇ ಎಂದು ಹೇಳಿದಲ್ಲಿ ಆ ವಿ.ವಿ.ಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು.
ನೀವೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಹಂಬಲದಲ್ಲಿ ಅವಸರಕ್ಕೆ ಬಿದ್ದು ನಿಮ್ಮ ಭವಿಷ್ಯವನ್ನು ಕತ್ತಲೆಗೆ ನೂಕುವ ಮುನ್ನ ಸರಿಯಾಗಿ ಯೋಚಿಸಿ, ಪರಿಶೀಲಿಸಿ ಮುಂದಡಿಯಿಡುವುದು ಜಾಗೃತ ಗ್ರಾಹಕ - ಜಾಗೃತ ವಿದ್ಯಾರ್ಥಿಯ ಲಕ್ಷಣ.

published in Vivek samachar, a ABVP monthly news letter from mangalore. |

No comments:
Post a Comment