ಬೆಳಿಗ್ಗೆ ತರಕಾರಿ ಮಾರುವ ತಳ್ಳು ಗಾಡಿಯವನು ಬಂದಾಗ ಸುತ್ತುಗಟ್ಟಿ ಕೊಳ್ಳುತ್ತಿದ್ದ ಗೃಹಿಣಿಯರು ಇದೀಗ ಸುಪರ್ ಮಾರ್ಕೆಟ್ ನ ಶೆಲ್ಫ್ ಗಳನ್ನು ಜಾಲಾಡುತ್ತಾರೆ. ಈ ಹಿಂದೆ ಚಿತ್ರಾನ್ನ ಪುಳಿಯೋಗರೆ ತಿನ್ದುಕೊಂಡಿದ್ದ ಮಹಿಳೆಯರು ನೂಡಲ್ಸ್ ಪಾಸ್ತಾ ಖರೀದಿಸುತ್ತಾರೆ. ಕಂಪೆನಿಗಳು ಟ್ಯಾಕ್ಸ್ ಉಳಿತಾಯಕ್ಕೆಂದು ನೀಡುವ Sodexo ಕೂಪನ್ ಎಣಿಸಿ ಎಣಿಸಿ ಪಾವತಿಸುತ್ತಾರೆ. ಆದರೆ ಸುಪರ್ ಮಾರ್ಕೆಟ್ ಕ್ರಾಂತಿಯ ಹಿಂದೆ ಅಡಗಿರುವ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳ ಹಾಗೂ ಬೀದಿಬದಿಯ ತಳ್ಳುಗಾಡಿಯವರ ನೋವು ನಮಗೆ ತಿಳಿಯುವುದೇ ಇಲ್ಲ.
ಇತ್ತೀಚಿಗೆ ರಿಲಯನ್ಸ್ ಫ್ರೆಶ್ ಮಳಿಗೆಗೆ ಭೇಟಿ ಕೊಟ್ಟಾಗ ದರ ಪಟ್ಟಿ ನೋಡಿ ಚಕಿತನಾಗಿದ್ದೆ. ಬೆಂಡೆಕಾಯಿ 15ರೂಪಾಯಿ, ಕ್ಯಾರೆಟ್ 20 ರೂಪಾಯಿ, ಮೂಸಂಬಿ 25, ಹೂ ಕೋಸು ಕೇವಲ 6 ರೂಪಾಯಿಗೆ ಮಾರಾಟವಾಗುತ್ತಿತ್ತು. ಹೊರಗಡೆ ಮಾರುಕಟ್ಟೆಯಲ್ಲಿ ಅಂದಿನ ದರ ಕನಿಷ್ಠ ಅಂದರೂ ದುಪ್ಪಟ್ಟು ಇದ್ದುದು ನಿಜ. ಆರಂಕಿ ಸಂಬಳ ಎಣಿಸುವ ಸಾಫ್ಟಿಗರೂ ಬೆರಗಾಗಿ ಮೂಟೆಗಟ್ಟಲೆ ತರಕಾರಿ ಹೊತ್ತುಕೊಂಡು ಹೋಗುತ್ತಿದ್ದುದನ್ನು ನೋಡಿ ಅಂಬಾನಿ ಎಂಬ ಆ ಮಹಾನುಭಾವನ ಬಗ್ಗೆ ನಿಜವಾಗಿಯೂ ಗೌರವದ ಭಾವನೆ ಹುಟ್ಟಿತ್ತು. ರೈತರಿಂದ ನೇರವಾಗಿ ಖರೀದಿಸಿ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಬಗ್ಗೆ ಮೆಚ್ಚುಗೆ ಎನಿಸಿತು ಮತ್ತು ಒಂದು ಕಾಲದಲ್ಲಿ ಗ್ರಾಹಕರ ಸುಲಿಗೆ ನಡೆಸುತ್ತಿದ್ದ ಮಧ್ಯವರ್ತಿಗಳಿಗೆ ತಕ್ಕ ಪಾಠ ಕಲಿಸಿದಂತಾಯಿತೆಂದು ಅಂದುಕೊಂಡೆ.
ಆದರೆ ವಸ್ತು ಸ್ಥಿತಿ ಏನೆಂದರೆ ಜನರಿಗೆ

No comments:
Post a Comment